ಏಕದಂತ(ಚಲನಚಿತ್ರ) ಒಂದು ಕನ್ನಡ ಭಾಷೆಯ ಹಾಸ್ಯ - ನಾಟಕ ಚಿತ್ರವಾಗಿದೆ. ಈ ಚಿತ್ರದ ಪ್ರಮುಖ ಪಾತ್ರಗಳಲ್ಲಿ ವಿಷ್ಣುವರ್ಧನ್, ಪ್ರೇಮಾ ಮತ್ತು ರಮೇಶ್ ಅರವಿಂದ್ ಅಭಿನಯಿಸಿದ್ದಾರೆ. ಈ ಚಿತ್ರವನ್ನು ಮರಾಠಿಯ ನವ್ರ ಮಜ ನವಾಸಾಚಾ ಎಂಬ ಚಿತ್ರದಿಂದ ರಿಮೇಕ್ ಮಾಡಿದ್ದಾರೆ. ಈ ಚಿತ್ರವು ೧೬ನೇ ಮಾರ್ಚ್ ೨೦೦೭ ರಲ್ಲಿ ಬಿಡುಗಡೆಯಾಯಿತು. ಈ ಚಿತ್ರವು ಸರಾಸರಿ ಮತ್ತು ವಿಮರ್ಶಾತ್ಮಕ ಪ್ರತಿಕ್ರಿಯೆ ನೀಡಿತು.